ಮೊನ್ನೆ ನನಗೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ದೊರಕಿತ್ತು.
ನಮ್ಮ ಬಳಗದ ಮಿಂಚೆಗಳಲ್ಲಿ ಓದಿದ್ದಂತೆ ಬೆಂಗಳೂರಿಗೆ ಬಂದು/ಹೋಗುವ ಎಲ್ಲ ಬ್ರಿಟಿಷ್ ಏರ್ವೇಸ್ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊರಡಿಸುವುದು ತಿಳಿದಿತ್ತು.
ಲಂಡನ್ ನಿಂದ ಹೊರಡುವಾಗ ಕನ್ನಡದಲ್ಲಿ ಪ್ರಕಟಣೆ ಹೊರಡಿಸಿದರು..
ಬೇರೆ ದೇಶದ ನೆಲದಲ್ಲಿ ಎಲ್ಲ ಪ್ರಯಾಣಿಕರ ಮುಂದೆ ಕನ್ನಡದಲ್ಲಿ ಪ್ರಕಟಣೆ ಕೇಳುವುದು ನಿಜಕ್ಕೂ ಮನಸ್ಸಿಗೆ ಬಹಳ ಖುಷಿ ಕೊಟ್ಟಿತು.
ನಂತರ ಪ್ರಕಟಣೆ ಮಾಡಿದ ಗಗನಸಖಿಯನ್ನು ಮಾತನಾಡಿಸಿ ಕನ್ನಡದಲ್ಲಿ ಪ್ರಕಟಣೆ ಮಾಡಿದ್ದಕ್ಕೆ ಧನ್ಯವಾದ ಹೇಳಿ ಬಂದೆ.
ಅವನಿಗೆ ಕನ್ನಡದಲ್ಲಿ ಮಾತನಾಡಲು ಬರುವ ಕಾರಣದಿಂದಲೇ ಆ ಕೆಲಸ ಸಿಕ್ಕಿದ್ದು ಎಂದು ತಿಳಿದು ಸಂತೋಷ ಆಯಿತು..
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವ ಎಲ್ಲ ಅಂಗಡಿಗಳ ಸಹಾಯಕರುಗಳಿಗೆ ಕನ್ನಡ ಮಾತನಾಡಲು ಬರುತ್ತದೆ .
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಹೋರಾಟಕ್ಕೆ ಮನಸ್ಸಿನಲ್ಲಿ ಧನ್ಯವಾದ ಹೇಳಿ ಊರಿಗೆ ಹೊರಟೆ.