Sunday, December 12, 2010

ಕನ್ನಡದಲ್ಲಿ ಸೇವೆಗಳನ್ನು ಕೇಳಿ ಪಡೆಯುವುದರಿಂದ ಆಗುವ ಲಾಭ

ಕೆಳಗಿನ ಕೆಲಸದ ಜಾಹಿರಾತನ್ನು ನೋಡಿ.

------------------
Greetings from Firstsource Solutions Ltd,
Position : Customer Support Associate
Qualification : +2 with 1yr Exp (Any), Diploma Fresher, Graduate Fresher.
Language : Good Fluency in Kannada, with Average Communication in English
Job Location : Chennai
Salary : Attractive salary for Freshers
Candidates are covered under ESI,PF and accident and life insurance coverage for 5Lakhs.
Contact for interview- Srihari Manickam @ 098430 94630.
------------------
ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎನ್ನುವುದು ನಮ್ಮ ಭ್ರಮೆ.ಖಾಸಗಿ ಕಂಪನಿಗಳಲ್ಲೂ ಕನ್ನಡ ಬಲ್ಲವರಿಗೆ ಉದ್ಯೋಗಗಳು ದೊರೆಯುತ್ತವೆ ಹಾಗು ಗ್ರಾಹಕರಾಗಿ ನಮಗಿರುವ ಕೆಲವು ಹಕ್ಕುಗಳನ್ನು ಚಾಲಯಿಸಿದರೆ ಈ ರೀತಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಹುದು.

೧. ಗ್ರಾಹಕರಾಗಿ ನಾವು ಅಂಗಡಿ,ಶಾಪಿಂಗ್ ಮಾಲ್,ಬ್ಯಾಂಕ್,ಏಟಿಎಂ,ವೆಬ್ಸೈಟ್,ಇನ್ಸೂರೆನ್ಸ್ ಕಂಪನಿ ಹಾಗು ಇತರೆ ಜಾಗಗಳಲ್ಲಿ ಸೇವೆಯನ್ನು ಕನ್ನಡದಲ್ಲೇ ಪಡೆಯುವುದು.
೨. ಎಲ್ಲಿ ಕನ್ನಡದಲ್ಲಿ ಸೇವೆ ಲಭ್ಯವಿಲ್ಲವೋ ಅಲ್ಲಿ ಅದಕ್ಕಾಗಿ ಮನವಿ ಮಾಡುವುದು - ಹೀಗೆ ಮಾಡುವುದರಿಂದ ಕಂಪನಿಗಳಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ ದೊರೆಯುತ್ತದೆ.
೩. ಇಂತಹ ಉದ್ಯೋಗಗಳು ಹೆಚ್ಚಿದಂತೆ ಕನ್ನಡ ಮಾರುಕಟ್ಟೆಯ ಮೊದಲ ಆಯ್ಕೆಯ ಭಾಷೆಯಾಗುತ್ತದೆ. ಅಲ್ಲಿ ಉಪಯೋಗ ಮೌಲ್ಯ (utility value) ಕಾಣಿಸುತ್ತೆ.
೪. ಕನ್ನಡ ಅಡುಗೆ ಮನೆಗೆ ಸೀಮಿತವಾಗದೇ ತಂತ್ರಜ್ಞಾನಕ್ಕೂ ಹೊಂದಿಕೊಳ್ಳುವ ನುಡಿಯಾಗುತ್ತೆ.

ಎಲ್ಲವನ್ನೂ ಸರಕಾರವೇ ಮಾಡಬೇಕು..ನಾವು ಕೂತು ನೋಡುತ್ತೇವೆ ಎನ್ನುವ ಮನಸ್ಥಿತಿಯನ್ನು ಬದಿಗೊತ್ತಿ ನಮ್ಮ ಕೈಲಾದದ್ದನ್ನು ನಾವು ಮಾಡೋಣ.ಏನಂತೀರ?

No comments:

Post a Comment