Saturday, January 30, 2010

ಗೂಗಲ್ ನ್ಯೂಸ್ ಅಲ್ಲಿ ಕನ್ನಡ ಅದೇಂಗಪ್ಪ ಬರುತ್ತೆ?


ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು ಎಂದು ಚೆನ್ನಾಗಿ ಮೂಡಿಬಂದಿದೆ.
ಇಂದು ನಾವು ಪ್ರಿಯಾಂಕ್ ರವರು ಸೂಚಿಸಿರುವ ಕೆಲಸಗಳನ್ನು ಮಾಡುವುದರ ಜೊತೆಗೆ ಈ ಸಮಸ್ಯೆಯ ಮೂಲ ಕಾರಣಗಳು ಯಾವುವು ಎಂದು ಯೋಚಿಸಬೇಕಾಗಿದೆ .
1. ನಮ್ಮ ಮನೆಗಳಲ್ಲಿ ಕನ್ನಡ ಪತ್ರಿಕೆ ಹಾಗು ಕನ್ನಡ ಸಾಪ್ತಾಹಿಕಗಳನ್ನು ತರಿಸುವುದು ಅಥವಾ ಓದುವುದು ಕಡಿಮೆ ಆಗಿರಬಹುದೇ? ಆದ ಕಾರಣ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡದ ಲೇಖನ,ನ್ಯೂಸ್ ಗಳನ್ನು ಓದುವುದು ಕಡಿಮೆ ಮಾಡಿದ್ದೀವ ?
ನಮಗೆ ಅಚ್ಚುಮೆಚ್ಚಿನ ಹವ್ಯಾಸಗಳು ಅಥವಾ ಆಟಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಾಗ ಅಂತರ್ಜಾಲದಲ್ಲಿ ವಿಕಿಪೀಡಿಯದಂತ ತಾಣಗಳನ್ನು ಉಪಯೋಗಿಸುತ್ತೇವೆ .ಹಾಗೆಯೇ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸವಿದ್ದು ಅದು ಸಿಗದಿದ್ದಾಗ ನಾವು ಅಂತರ್ಜಾಲದಲ್ಲೂ ಕೂಡ ಕನ್ನಡ ನ್ಯೂಸ್ ಗಳನ್ನೂ ಹುಡುಕಬೇಕು.
2. ಕನ್ನಡ ಪತ್ರಿಕೆ ಓದುವಂತ ಬಹುಪಾಲು ಜನರಿಗೆ ಅಂತರ್ಜಾಲ ಉಪಯೋಗಿಸುವುದು ತಿಳಿದಿಲ್ಲವೇ? ಅದಕ್ಕಾಗಿ ಅವರು ಅಂತರ್ಜಾಲದಲ್ಲಿ ಕನ್ನಡ ತಾಣಗಳಲ್ಲಿ ಓದುತ್ತಿಲ್ಲವೇ ?
3. ಕನ್ನಡ ಭಾಷೆ ತಿಳಿದಿರುವ ಮತ್ತು ಅಂತರ್ಜಾಲವನ್ನು ದಿನನಿತ್ಯ ಬಳಸುವಂತ ಐ ಟಿ ಮಂದಿ ಹಾಗು ವಿದ್ಯಾರ್ಥಿಗಳಿಗೆ ಕನ್ನಡ ನ್ಯೂಸ್ ತಾಣಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆ ಇದ್ದ ಹಾಗೆ ಕಾಣುತ್ತಿದೆ.
ಈ ಗುಂಪಿನಲ್ಲಿ ಬರುವ ನಾವುಗಳು ಇಂದು ಹೆಚ್ಚು ಕಾಳಜಿವಹಿಸಿ ಪ್ರಿಯಾಂಕ್ ರವರು ಹೇಳಿರುವ ಕೆಲಸಗಳನ್ನು ಮಾಡಬೇಕು ಹಾಗು ಅದನ್ನು ನಮ್ಮ ಇತರ ಗೆಳೆಯರಿಗೆ ತಿಳಿಸಬೇಕು.
4. ನಾವೆಲ್ಲಾ ಕನ್ನಡ ಪತ್ರಿಕೆಗಳನ್ನೇ ಓದಿಕೊಂಡು ದೊಡ್ದವರಗಿದ್ದೇವೆ.ಇಂದು ಕೆಲಸ ಅಥವಾ ಬೇರೆ ಬೇರೆ ಕಾರಣಗಳಿಂದ ಇಂಗ್ಲಿಷ್ ಹಾಗು ಇತರೆ ಭಾಷೆಗಳನ್ನು ಕಲಿತ ನಂತರ ಕನ್ನಡ ಪತ್ರಿಕೆ ಓದುವುದನ್ನು ನಿಲ್ಲಿಸಿದ್ದೀವ ? ಜಗತ್ತಿನ ಎಲ್ಲ ಸುದ್ದಿಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ನೋಡುತ್ತಿದ್ದೀವ ?

ಇಲ್ಲಿ ಸಂಪಾದಕರು ಹಾಗು ಪತ್ರಿಕೆಯವರ ಪಾತ್ರವೇನು?
ಅಂತರ್ಜಾಲದ ಮುಖಾಂತರ ನ್ಯೂಸ್ ಓದುವವರ ಸಂಖ್ಯೆ ಜಾಸ್ತಿ ಆದಾಗ ಪತ್ರಿಕೆ ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಒಂದು ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿ ಮನೆ ಮಾಡಿದೆ. ಆದರೆ ಇದರಿಂದ ಹಾನಿಯಾಗುವುದಕ್ಕಿಂತ ಹೆಚ್ಚು ಉಪಯೋಗವಾಗುತ್ತದೆ.
ಅಂತರ್ಜಾಲದಲ್ಲಿ ಗೂಗಲ್ ಇಂದು ಜಾಹಿರಾತಿನ ಆದಾಯದಿಂದ ದೈತ್ಯಾಕಾರವಾದ ಸಂಸ್ಥೆಯಾಗಿ ಬೆಳೆದಿದೆ.
ಇಂದಿನ ದಿನದಲ್ಲಿ ಪತ್ರಿಕೆಗಳು ಅಂತರ್ಜಾಲದಲ್ಲಿ ತಮ್ಮ ಇರುವಿಕೆಯನ್ನು ಬಹಳ ಗಟ್ಟಿಯಾಗಿ ತೋರಿಸಿಕೊಳ್ಳಬೇಕಿದೆ ಹಾಗು ಜಾಹಿರಾತಿನ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು.
ಗೂಗಲ್ ನ್ಯೂಸ್ ನಲ್ಲಿ ಸ್ಥಾನ ಪಡೆದರೆ ಗೂಗಲ್ ಗೆ ಎಲ್ಲೆಲ್ಲಿ ಮಾರುಕಟ್ಟೆ ಇದೆಯೋ ಅಲ್ಲೆಲ್ಲ ಕನ್ನಡ ಪತ್ರಿಕೆಗಳು ಪ್ರವೇಶ ಪಡೆಯಬಹುದು.

ಹಾಗಾಗಿ ಇಂದು ಪತ್ರಿಕೆಯವರು ಹೊಸ ತಂತ್ರಜ್ಞಾನ ಗಳಾದ unicode ಹಾಗು ಇನ್ನಿತರವನ್ನು ಬಳಸಿ ತಮ್ಮ ನ್ಯೂಸ್ ಸೈಟ್ ಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರಿಗೆ ಸಿಗುವ ಹಾಗೆ ಮಾಡಬೇಕು.

2 comments:

  1. ನಮ್ಮಲ್ಲಿ ಕನ್ನಡ ದಿನಪತ್ರಿಕೆಗಳನ್ನ ಓದುವ ಹವ್ಯಾಸ ಹೆಚ್ಚಬೇಕು.

    ReplyDelete
  2. one has to read more kannada sites.....
    see below one of the kannada site...
    www.sullianews.com

    ReplyDelete