Friday, June 4, 2010

ಯಾವಾಗ್ರಿ ಎದ್ದೇಳ್ತಾರೆ ಕನ್ನಡ ಚಿತ್ರರಂಗದವರು????

ಮೊನ್ನೆ ಕ್ಯಾಲಿಫ಼ೊರ್ನಿಯಾದ ಬೇ ಏರಿಯಾದಲ್ಲಿ SP ಬಾಲಸುಬ್ರಮಣ್ಯ ರವರ ಕನ್ನಡ ಹಾಡುಗಳ ಕಾರ್ಯಕ್ರಮ ನೆಡೆಯಿತು.
ಆ ಕಾರ್ಯಕ್ರಮದಲ್ಲಿ SPB ಅವರ ಕಂಠದಿಂದ ಡಾ.ರಾಜ್,ಶ್ಂಕರ್ ನಾಗ್,ವಿಷ್ಣುವರ್ಧನ್ ರ ಹಾಗೂ ಇನ್ನೂ ಹಲವು ಕನ್ನಡ ಚಲನಚಿತ್ರ ಗೀತೆಗಳನ್ನು ಕೇಳಿ ಬಹಳ ಸಂತೋಷವಾಯಿತು.
SPB ಅವರು ಅಷ್ಟೆಲ್ಲಾ ಹೆಸರು ಮಾಡಿದ ಗಾಯಕರಾಗಿಯೂ ಅವರಲ್ಲಿ ಸ್ವಲ್ಪವೂ ಅಹಂ ಇಲ್ಲ,ಎಲ್ಲರಿಗೂ ಗೌರವ ನೀಡುವಂತವರು ಮತ್ತು ೬೫ ವರ್ಷವಾದರೂ ಇನ್ನೂ ೧೮ ವರ್ಷದ ಹುಡುಗನಂತೆ ಲವಲವಿಕೆ ಅವರದು.
ಆ ಕಾರ್ಯಕ್ರಮದಲ್ಲಿ SPB,ಅವರ ತಂಗಿ,ಮತ್ತೊಬ್ಬ ತಮಿಳುನಾಡಿನ ಮಹಿಳೆ,ಆಂಧ್ರದ ಒಬ್ಬ ಹುಡುಗ ಮತ್ತು ತಬಲ,ಸ್ಯಾಕ್ಸೊಫೋನ್ ನುಡಿಸುವ ಇನ್ನಿತರ ಆಂಧ್ರದ ಕಲಾವಿದರು ಇದ್ದರು.
SPB ಬಿಟ್ಟರೆ ಉಳಿದವರಿಗ್ಯಾರಿಗೂ ಕನ್ನಡ ಮಾತನಾಡಲು ಬರದಿದ್ದರೂ ಕನ್ನಡ ಹಾಡುಗಳನ್ನು ಹೇಳಿ ರಂಜಿಸಿದರು.

ಒಟ್ಟಿನಲ್ಲಿ ಜೀವನದಲ್ಲಿ ಒಮ್ಮೆ ನೆನಪಿಟ್ಟುಕೊಳ್ಳುವಂತ ಕಾರ್ಯಕ್ರಮ ನೋಡಿದ ಖುಷಿ ಆಯಿತು.
ಈ ಕಾರ್ಯಕ್ರಮ ನೆಡೆಸಿಕೊಟ್ಟ ಕಲಾಲಯ ಎನ್ನುವ ಸಂಸ್ಥೆ ಹಾಗು ನಮ್ಮ ಉತ್ತರ ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟವಾದ ಕೆ.ಕೆ.ಎನ್.ಸಿ ಗೆ ಧನ್ಯವಾದಗಳು.

ಇಲ್ಲಿಯವರೆಗೂ ಹೇಳಿರುವ ಎಲ್ಲ ವಿಷಯದ ಬಗ್ಗೆ ಖುಷಿಯಿದೆ.
ಆದರೆ ಮೇಲೆ ಹೇಳಿರುವುದನ್ನು ಸೂಕ್ಶ್ಮವಾಗಿ ಗಮನಿಸಿ ನೋಡಿ.SPB,ಹಾಡು ಹೇಳುವವರು,ಸಂಗೀತ ಸಾಧನ ನುಡಿಸುವರೆಲ್ಲರೂ ಮತ್ತು ಕಲಾಲಯ ಸಂಸ್ಥ್ತೆಇವರ್ಯಾರೂ ಕನ್ನಡ ಮಾತನಾಡುವವರು ಅಥವಾ ಕರ್ನಾಟಕದವರಲ್ಲ.
ಅದರಲ್ಲಿ ಕೆಲವರು ಮಾತ್ರ ಕನ್ನಡದಲ್ಲಿ ಹಾಡಲು ಕಲಿತವರು ಮತ್ತು ಮುಕ್ಕಾಲು ಭಾಗ ಎಲ್ಲರೂ ಕನ್ನಡ ಬರದೇ ಕಾರ್ಯಕ್ರಮ ನೀಡಿದರು.

ನನ್ನ ಕ್ಯಾತೆ ಇಲ್ಲಿ ಇವರ ಮೇಲಲ್ಲ.ಕಲಾವಿದರು ಯಾವ ಭಾಷೆಯಾದರೇನು ಅವರನ್ನು ಪ್ರೋತ್ಸಾಹಿಸಬೇಕು.
ಆದರೆ ನಮ್ಮ ಹಾಡು ಹೇಳುವುದಕ್ಕು ಬೇರೆ ಭಾಷೆಯವರು,ಸಂಗೀತ ಸಾಧನ ನುಡಿಸುವುದಕ್ಕು ಬೇರೆ ಭಾಷೆಯವರು..ಕೊನೆಯಲ್ಲಿ ಕಾರ್ಯಕ್ರಮ ಆಯೋಜಿಸುವವರೂ ಕೂಡ ತಮಿಳರೋ,ತೆಲುಗರೋ...
ಮತ್ತೆ ಕನ್ನಡದವರು ಎಲ್ಲಿ ಸ್ವಾಮಿ??? ಹಾಡು ಕೇಳಿ ಚಪ್ಪಾಳೆ ತಟ್ಟಿ ಮನೆಗೆ ಬಂದು ಊಟ ಮಾಡುವುದಕ್ಕಷ್ಟೇನಾ?

ಅಲ್ಲ,ಬೇರೆ ಭಾಷೆಯವರು ಕನ್ನಡ ಕಲಿತು ಇಂತ ಕಾರ್ಯಕ್ರಮ ನೀಡಿ ಹಣ ಮಾಡಿಕೊಳ್ತಾ ಇರ್ಬೆಕಾದ್ರೆ,ನಮ್ಮವ್ರಿಗೆ ಎನಾಗಿದೆ ದಾಡಿ.
ನಮ್ಮ ರಾಜೇಶ್ ಕ್ರಿಷ್ಣನ್,ಹೇಮಂತ್,ಗುರುಕಿರಣ್,ಚೈತ್ರಾ,ಹರಿಕ್ರಿಷ್ಣ,ಪುನೀತ್,ಗಣೇಶ್,ಸುದೀಪ್ ಇವರೆಲ್ಲ ಈ ತರ ತಂಡ ಕಟ್ಟಿಕೊಂಡು ಜಗತ್ತಿನ ಎಲ್ಲ ಕಡೆ ಕಾರ್ಯಕ್ರಮ ನೀಡೋಕಾಗಲ್ವ?
ಚಲನಚಿತ್ರಕ್ಕೆ ಮಾಡಿದ್ರೆ ಅಷ್ಟೇ ಸಾಕ?
ಕರ್ನಾಟಕ ಇರಲಿ,ಭಾರತ ಇರಲಿ,ಜಗತ್ತಿನ ಯಾವುದೇ ಭಾಗ ಇರ್ಲಿ..ಎಲ್ಲ ಕಡೆ ಇರುವ ಕನ್ನಡ ಅಭಿಮಾನಿಗಳ ಜೊತೆ ಸಂಪರ್ಕ ಮಾಡಬೇಡ್ವಾ? ಹಾಗೆ ಮಾಡಿದ್ರೇನೇ ಜನಕ್ಕೆ ಕನ್ನಡ ಸಿನಿಮಾ ಬಗ್ಗೆ ಕೂಡ ಗೊತ್ತಾಗೋದು..
ಇದು ಒಟ್ಟಿನಲ್ಲಿ ಚಲನಚಿತ್ರರಂಗಕ್ಕೆ ಇನ್ನೂ ಹೆಚ್ಚು ಆದಾಯ ತರಲು ಸಹಾಯ ಮಾಡತ್ತೆ..

ನಮ್ಮಲ್ಲಿರೋ ಕಲಾವಿದರಿಗೆ,ಚಲನಚಿತ್ರರಂಗದಲ್ಲಿರುವವರಿಗೆ,ಕನ್ನಡ ಜನರಿಗೆ ಇಂಥದ್ದೂಂದು ಕಾರ್ಯಕ್ರಮ ತಾವೇ ನೆಡೆಸುವ ಶಕ್ತಿಯಿಲ್ಲವೇ?
ನಮ್ಮ ಕನ್ನಡಚಲನಚಿತ್ರರಂಗಕ್ಕೆ ಈಗ ಇರುವ ಆದಾಯ ಸಾಕ?ಇಂತ ಇನ್ನೂ ಹಲವು ರೀತಿಯ ಕಾರ್ಯಕ್ರಮಗಳ ಮುಖಾಂತರ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದು ಬೇಡ್ವಾ?

ಯಾವಾಗ್ರಿ ಎದ್ದಳ್ತಾರೆ ನಮ್ಮ ಕನ್ನಡ ಚಿತ್ರರಂಗದವರು????

1 comment:

  1. enri neevu varshakke erade lekhana baritiraa

    ReplyDelete